ಕತ್ತಲೆ ಬೆಳಕಿನ ಚಿತ್ತಾರದಲಿ..
-----------------------------
ಹಣತೆಯ ಜ್ಯೋತಿ
ಚಿಗುರೆಲೆಯ ಜತೆ
ಯಾರಾ ವನಿತೆ?
ಗಾಳಿಗಾಡಿದ ಸೊಡರಂತೆ..
ಮೇಲೆರಿದ ಭೂತ ಪ್ರೇತವೊ
ಗಾಳಿಗ್ಹಾರಾಡಿದ ಅಪ್ಸರೆಯೊ
ದೀಪದ ಕೆಳಗಿನ ಕತ್ತಲೊ
ನೆರಳೊ ಬೆಳಕೊ
ಅರಿವಾಗದ ಬೆತ್ತಲೊ?
ತಥ್ಯವಿದೆ ಸತ್ಯವಿದೆ
ಒಂದರ ಬೆನ್ಹಿಡಿದಿನ್ನೊಂದು
ಜತೆಜತೆಯಾಗೆ ಸ್ವಗತ
ಕಣಿವೆ ಕಾಲುವೆ ಸಹಿತ
ಗಂಡು ಹೆಣ್ಣುಗಳ ಚಿತ್ತ
ಯೋನಿಜ ಕಲೆ ಅಯೋನಿಜ
ನಿಮಿತ್ತ..
ಕತ್ತಲ ಗೋಡೆಯ್ಹತ್ತಿದೆ ಬೆಳಕು
ಪ್ರೀತಿ ಪರಿಣಯ ಪ್ರಣಯಕು
ಜೀವ ಸಮ್ಮಿಲನಕು
ಕತ್ತಲೊಳಗೆ ಬೆಳಕೊ
ಬೆಳಕೊಳಗೆ ಕತ್ತಲೆಯೊ
ಒಟ್ಟಿನಲಿ
ಒಗ್ಗಟ್ಟಿನಲಿವೆ ಸತ್ಯ
ಗರ್ಭ ಧರಿಸಿವೆ ನಿತ್ಯ
ಗುಟ್ಟು ಕತ್ತಲೆಗೆ ಮಾತ್ರ
ಹೇಳಿಬಿಡು ಬೆಳಕೆ..
ಗುಡಿಸುವ ಕಾಯಕ ತಾನೆ
ನಿನ್ನಾಕೆ..!
- ನಾಗೇಶ ಮೈಸೂರು (random thoughts based on the picture)
Comments
ಕತ್ತಲೆ ಬೆಳಕಿನ ಚಿತ್ತಾರದಲಿ..
Add new comment