ಪರಿವೇಶಣ
ನವೆಂಬರ್ ೧೮
"ನಿತ್ಯ ಹುಟ್ಟಿ ಮುಳುಗುವ ರವಿ"
ಹುಟ್ಟುಹಬ್ಬ ನನಗೆಂದೂ ಯಾವ ಕಾರಣಕ್ಕೂ ವಿಶೇಷ ಎನಿಸಿದ್ದಿಲ್ಲ. ಒಂದೊಮ್ಮೆ ಮತ್ತೊಂದು ವರುಷ ಕಳೆದುಹೋಯಿತಲ್ಲ ಎಂಬ ಬೇಸರ ಮೂಡಿಸುತ್ತಿದ್ದುದಂತೂ ನಿಜ. ಆದರೆ ಅದೂ ಹೆಚ್ಚು ಹೊತ್ತು ಮನಸ್ಸಿನಲ್ಲುಳಿಯುತ್ತಿರಲಿಲ್ಲ. ಹುಟ್ಟುಹಬ್ಬದ ಕೇಕ್, ಕೇಕ್ ಕಟ್ ಮಾಡುವ ಸಂದರ್ಭದಲ್ಲಿ ನೆರೆಯುವ ಜನ, ಆ ನಂತರದ ಘಳಿಗೆ, ನೆರೆದವರಿಂದ ಸಿಗಬಹುದಾದ ಉಡುಗೊರೆ - ಇವು ಯಾವೂ ನನಗೆಂದೂ ಆಸಕ್ತಿ ಹುಟ್ಟಿಸಿದ್ದಿಲ್ಲ. ಕಾಲೇಜಿನ ಕ್ಲಾಸ್ ರೂಮಿನಲ್ಲಿ ಯಾರದ್ದಾದರೂ 'ಬರ್ತ್ ಡೇ'ಗೆಂದು ಕ್ಲಾಸ್ ಮುಗಿಯುತ್ತಲೇ ಕೇಕ್ ಕಟ್ ಮಾಡಿಸಿದ ಸಮೂಹ ಕೇಕೆ ಹಾಕುತ್ತಿದ್ದರೆ ನನ್ನ ಮನಸ್ಸು ನನ್ನನ್ನು ಅದೆಲ್ಲದರಿಂದ ದೂರ ಓಡುವಂತೆ ಮಾಡುತ್ತಿತ್ತು. ಅದೇ ಆ 'ಬರ್ತ್ ಡೇ ಬೇಬಿ'ಯಿಂದ 'ಟ್ರೀಟ್' ಸಿಕ್ಕ ನಂತರ ಬರ್ತ್ ಡೇ ಯಾರದ್ದು ಎಂಬುದೂ ನೆನಪಿರದಂತೆ ಇರುತ್ತಿದ್ದ ದೃಶ್ಯ ಕೇಕ್ ಕಟ್ ಮಾಡಿಸಿದವರ ವಿಶ್ವಾಸ ಎಷ್ಟಿರಬಹುದು ಎಂಬುದರ ಬಗ್ಗೆ ಅಪಾರ ಆಲೋಚನೆಗಳು ಸುಳಿದು ಹೋಗುವಂತೆ ಮಾಡುತ್ತಿತ್ತು.
ಹುಟ್ಟುಹಬ್ಬ ಆಚರಣೆ ಅವರವರ ಭಾವನೆಗಳಿಗೆ, ಆದರ್ಶಗಳಿಗೆ, ಆಲೋಚನೆಯ ರೀತಿಗೆ ಬಿಟ್ಟದ್ದು ಎಂದು ನನಗನಿಸುತ್ತದೆ. ತಮಗೆ ನೆಮ್ಮದಿ ಸಿಗುವ, ತಮಗೆ ಸಂತೋಷ ಉಂಟುಮಾಡುವ ಯಾವುದೇ ಆಚರಣೆ ಅಂದಿನ 'ಹಬ್ಬ'ವಾಗಬಹುದು ಎಂದು ನನ್ನ ಅನಿಸಿಕೆ. ಅದು ತನಗಿಷ್ಟವಾದ ಕೆಲಸದಲ್ಲಿ ತೊಡಗಿಕೊಳ್ಳುವುದಿರಬಹುದು, ತನಗೆ ಇಷ್ಟವಾದೆಡೆ ಕುಳಿತು ಸಮಯ ಕಳೆಯುವುದಿರಬಹುದು. ಯಾವ ಆಚರಣೆಯನ್ನೂ ಕೀಳಾಗಿ ನೋಡಬೇಕಿಲ್ಲ, ಯಾವ ಆಚರಣೆಯನ್ನೂ ಆಡಂಬರದಿಂದ ಕಾಣಬೇಕಿಲ್ಲ. ಕೊನೆಗೆ ಆ 'ಹಬ್ಬ' ನಡೆಸಿದ ರೀತಿಗೊಂದು ನಾವು ಅರಿಯದ ಕಾರಣವೇ ಇದ್ದಿರುತ್ತದೆ. ಒಂದೊಮ್ಮೆ ಅರಿತರೂ ಅರಿಯದಂತಿರುತ್ತೇವೆ. ಅವರವರ ಇಷ್ಟದಂತೆ ಇರಬಹುದು ಆಚರಣೆ. ಅವರವರ ಸ್ವಂತದ ವಿಚಾರ. ಮುಂದೆ ಓದಿ »
ಕಲ್ಲೊಳಡಗಿದ ಜೀವ
ನಾನು ಆರ್ಕುಟ್ಟಿನಲ್ಲಿ ಈ ಫೋಟೋ ಹಾಕಿದ್ದೆ. ಸಾವನದುರ್ಗಕ್ಕೆ ಹೋದಾಗ ತೆಗೆದದ್ದು. ಇದಕ್ಕೆ ಸವಿತಾರವರು ನಿನ್ನೆ ಬರೆದ ಪ್ರತಿಕ್ರಿಯೆ ಈ ಚಿತ್ರಕ್ಕೆ ಒಂದು ಚೆಂದದ ಶೀರ್ಷಿಕೆ ಕೊಟ್ಟಿತು!
ಆ ಶೀರ್ಷಿಕೆಯೊಂದಿಗೆ ಚಿತ್ರ ಮತ್ತೆ ಹಾಕುತ್ತಿದ್ದೇನೆ ಇಲ್ಲಿ:
ಆ ಹುಡುಗಿಯ ಮನಸ್ಸು
ಧೂಳು ಹಿಡಿದು
ಕರ್ಕಷ ದನಿಯಲಿ ಕೂಗುತ್ತ
ರೀಡ್ ಮಾಡಲು ಪ್ರಯಾಸಪಡುತ್ತಿರುವ
ಫ್ಲಾಪಿ ಡ್ರೈವು
ಫ್ಲಾಪಿ ಓದಿದಂತೆಯೇ ಆಯಿತು
ಅವಳ ಮನದಲ್ಲಿರುವುದನ್ನರಿಯಲು ಪ್ರಯತ್ನಿಸಿದ್ದು.
(ಓದುಗರ ಗಮನಕ್ಕೆ: ಮುಂದೆ ಓದಿ »
ಅಂಬಾರಿ ದಿನಚರಿ
ಆ ಇಂಜಿನೀಯರಿಂಗ್ ಕಾಲೇಜಿನ ಕಾರ್ಯಕ್ರಮ ಹೋದವರ್ಷ ತಪ್ಪಿಸಿಕೊಂಡಿದ್ದೆ. ಕೊನೆಯ ಘಳಿಗೆಯಲ್ಲಿ ಬರಲಾಗದು ಎಂದು ಹೇಳಿದ್ದರ ಅಳುಕು ಮನಸ್ಸಿನಲ್ಲಿತ್ತು. ಹೀಗಾಗಿ ಈ ಬಾರಿ ಅಲ್ಲಿಯ ಹುಡುಗರು ಎಂದಿನ enthusiasmನಲ್ಲಿಯೇ ಕರೆದಾಗ ಬರುತ್ತೇನೆ ಎಂದು ಒಪ್ಪಿಕೊಂಡದ್ದು. ಹೆಚ್ಚಿನಂತೆ ನಾನು ಕಾರ್ಯಕ್ರಮಗಳಿಗೆ ಏನಾದರೂ ಸಬೂಬು ಹೇಳಿ ಚಕ್ಕರ್ ಹೊಡೆಯೋದೇ ಹೆಚ್ಚು. ಮುಂದೆ ಓದಿ »
ಕಂಪ್ಯೂಟರ್ ಮೇಲಿನ ಪ್ಲಾನೆಟೇರಿಯಂ - ಸ್ಟೆಲ್ಲೇರಿಯಮ್
ಸ್ಕೂಲಿನಲ್ಲಿ, ಕಾಲೇಜಿನಲ್ಲಿ ಓದುತ್ತಿದ್ದಾಗ ಘಂಟೆಗಟ್ಟಲೆ ಕರೆಂಟು ಹೋದರೆ ಅದು ತನ್ನದೇ ರೀತಿಯಲ್ಲಿ ಒಂದು ಒಳ್ಳೆಯ ಕೆಲಸ ಮಾಡುತ್ತಿತ್ತು. ನಮ್ಮೆನ್ನೆಲ್ಲ ಮಹಡಿಗೆ ಓಡಿಸಿ ನಕ್ಷತ್ರಗಳನ್ನು ಗುರುತಿಸುತ್ತ ಕೂರುವ ಕೆಲಸಕ್ಕೆ ಹಚ್ಚುತ್ತಿತ್ತು! ಮುಂದೆ ಓದಿ »
ಮುರಳಿ
'ಟೆಕ್ ಸಂಪದ'ದ ಒಟ್ಟಾರೆ ವಿಶನ್ನಿನ ಹಿಂದಿರುವ ಮನಸ್ಸು ಹಾಗೂ ಯೋಜನೆಯ ಟೀಮ್ ಲೀಡರ್ ಸಂಪದದ ಗೆಳೆಯ ಮುರಳಿ. ನಿತ್ಯ "ಲೇ, ಬೇಗ ರೆಡಿ ಮಾಡೋ - ಇದು ಇಂಪಾರ್ಟೆಂಟು" ಅನ್ನುತ್ತ ಕೆಲಸವನ್ನು push ಮಾಡುವವ ಇವನೆ. ಟೆಕ್ ಸಂಪದಕ್ಕಾಗಿ ಕಳೆದ ಹಲವು ತಿಂಗಳುಗಳಿಂದ ಸತತ ಸಕ್ರಿಯನಾಗಿರುವವನೂ ಕೂಡ ಇವನೇ. ತಂತ್ರಜ್ಞಾನದ ಹಲವು ವಿಷಯಗಳಿಂದ ಗ್ರಾಸ್ ರೂಟ್ ಟಚ್ ಮಾಡುವ ನಿಜವಾದ ಕಾಳಜಿ ಉಳ್ಳವ. ಸಂಪದದ ಐದನೇ ಸದಸ್ಯ.
ನಿನ್ನೆ ಮುರಳಿ ಅವನ ಡಿ ಎಸ್ ಎಲ್ ಆರ್ ಕ್ಯಾಮೆರಾ ಹಿಡಿದು ಮನೆಗೆ ಬಂದಿದ್ದ. ಅವನ ಕ್ಯಾಮೆರಾದಲ್ಲಿಯೇ ಅವನ ಫೋಟೋ ಬಂದದ್ದು ಹೀಗೆ:
ಗ್ನು/ಲಿನಕ್ಸ್ ಹಬ್ಬದ ದಿನ ಅರವಿಂದ ಕನ್ನಡದಲ್ಲಿ ಬರೆದಾಗ
ಮೈಸೂರಿನಲ್ಲವತ್ತು ಗ್ನು/ಲಿನಕ್ಸ್ ಹಬ್ಬ. ಕನ್ನಡದಲ್ಲಿ passionate ಆಗಿ ಬರೆಯಬೇಕೆಂದರೆ ಅರವಿಂದನಿಗಿಂತ ಉತ್ತಮ ಬೇರೆ ಯಾರೂ ಇರಲಿಕ್ಕಿಲ್ಲ. ಕನ್ನಡ ಅಂದ ಕೂಡ್ಲೆ ಇವನಿಗೆ ಶ್ರದ್ಧೆ, ಆಸಕ್ತಿ ದುಪ್ಪಟ್ಟು ಆಗುವುದು ಅಂತ ಹೇಳಿದರೂ ಉತ್ಪ್ರೇಕ್ಷೆಯಲ್ಲ! ನೀವೇ ನೋಡಿ.
ಅವನಿಗೂ ತಿಳಿಸದೆ ಈ ಚಿತ್ರಗಳ ಸಿರೀಸ್ ಇರುವ ಅನಿಮೇಶನ್ ಹಾಕುತ್ತಿದ್ದೇವೆ ಇಲ್ಲಿ. ಮುಂದೆ ಓದಿ »
ಮತ್ತೊಂದು ಭಾನುವಾರ
ಎಂದೂ ಬೇಗ ಏಳದವ ಇವತ್ತು ಮುಂಜಾನೆ ಎದ್ದು ಅತ್ತ ದೆಹಲಿಯಲ್ಲಾದ ಬಾಂಬ್ ಸ್ಪೋಟದ ಬಗ್ಗೆ ವಿವಿಧ ಸುದ್ದಿ ಮಾಧ್ಯಮಗಳ ವರದಿ ಓದುತ್ತಿದ್ದೆ. ನಡುನಡುವೆ ಉಪ್ಪುನೀರು gargle ಮಾಡೋದು, pillsಉ ಟಾನಿಕ್ಕು ಪಕ್ಕದಲ್ಲಿಟ್ಟುಕೊಂಡ ಕಂಪ್ಯೂಟರಿನ ಮುಂದೆ ಕುಳಿತುಕೊಳ್ಳಲು ಬೇಸರವಾದಾಗ ಸ್ವತಃ ಧೂಳು ಹಿಡಿದುಕೊಂಡಿದ್ದ ವ್ಯಾಕ್ಯೂಮ್ ಹಿಡಿದು ಕಸ ಹೊಡೆದದ್ದು. ಹೊರಗೆ ಹೋಟೆಲಿನಲ್ಲಿ ತಿಂದದ್ದಕ್ಕೆ ಇವೆಲ್ಲದರ ನಡುವೆ ನನಗೇ ನಾನೇ ಬೈದುಕೊಂಡದ್ದು. ಮುಂದೆ ಓದಿ »
“ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”
ಕನ್ನಡ ವಾಟರ್ ಪೋರ್ಟಲ್ಲಿನಲ್ಲಿ ಕಾವೇರಿ ಕುರಿತು ಒಂದು ಫೀಚರ್ ರೆಡಿ ಮಾಡುತ್ತ ತಲಕಾಡು ಫೋಟೋಗಳನ್ನು ನೋಡುತ್ತಿರುವಾಗ ಈ ವಿಷಯ ಮತ್ತೆ ನೆನಪಾಯಿತು. ಅಲ್ಲಿ ವಿವರಣೆಗೆಂದು ಇದ್ದ ಈ ವಿಷಯವನ್ನು ನೆನಪಿಸಿದ ಅನುವಾದದ ಸಾಲುಗಳು ಇಲ್ಲಿದೆ ನೋಡಿ: ಮುಂದೆ ಓದಿ »
ಭಾನುವಾರದ ಹಬ್ಬ
ಸರಿಯಾಗಿ ನಿದ್ರೆಯಿಲ್ಲದೆ, ಕಣ್ಣು ಸ್ಟ್ರೇಯ್ನ್ ಮಾಡಿಕೊಂಡು - ಇನ್ನು ಗ್ನು/ಲಿನಕ್ಸ್ ಹಬ್ಬ ಮಾಡೋದೇನೆ ಎಂದುಕೊಂಡು ಕುಳಿತಿದ್ದೆ. ಮುಂಜಾನೆ ನಾಲಕ್ಕಾಗಿತ್ತು. ಇನ್ನು ನಿದ್ರೆ ಮಾಡಲಾಗದೆಂದು LHC shutdown ಆದದ್ದರ ಬಗ್ಗೆ ಓದುತ್ತ ಕುಳಿತಿದ್ದೆ. ಒರಿಸ್ಸಾ ಪ್ರವಾಹದ ಬಗ್ಗೆ ಓದುತ್ತ ಕುಳಿತಿದ್ದೆ. ಸರಿಯಾಗಿ ಐದಕ್ಕೆ ಫೋನು ಬಂತು:
"ಎದ್ದಿದೀಯಾ ಹರಿ?"
"ಹೂಂ ಕಣೋ"
"ಸರಿ, ಈಗ ಹೊರಟೆ. ಕಾರು ತಗೊಂಡು ಇನರ್ಧ ಗಂಟೆಯಲ್ಲಿ ಅಲ್ಲಿರ್ತೀನಿ"
ಸರಿ, ರೆಡಿಯಾಗಿ ಬ್ಯಾನರ್ ಕೆಳಗಿಳಿಸಿ ಲ್ಯಾಪ್ಟಾಪ್ ಪ್ಯಾಕ್ ಮಾಡಿ ಹೊರಟೆ. ಕಾರಿನ ಸ್ಪೀಡು, ಡೆಕ್ ನ ವೂಫರ್ ಸದ್ದು ನಿದ್ರೆಯಿಲ್ಲದ ಮನಸ್ಸಿಗೆ ಸವಾಲೆಸೆದಿತ್ತು. ಈ ನಡುವೆ ಮುಂಜಾನೆಯ ಮಂಜಿನಲ್ಲಿ ರೋಡು ಮಿಸ್ ಆಗಿ ಕಳಕೊಂಡ ಕೆಲವು ಘಳಿಗೆಗಳು. ಅಂಕುಡೊಂಕಿನ ಮೈಸೂರು ರಸ್ತೆಯಲ್ಲಿ ರಾಮನಗರದ ಲೋಕರುಚಿ ತಲುಪುವಷ್ಟರಲ್ಲಿ ಎಂಟಾಗಿತ್ತು. ಸುತ್ತ ಹುಸಿ ಜನಪದ ಓಡಾಡಿಕೊಂಡಿದ್ದ ಹೋಟೆಲಿನಲ್ಲಿ ಕಡುಬು, ರಾಗಿ ರೊಟ್ಟಿ (ಅಷ್ಟೊತ್ತಿಗೇ) ನಮ್ಮ ತಿಂಡಿ. ಅತ್ತಿತ್ತ ಕಂಡ ಮೈಸೂರು-ಬೆಂಗಳೂರು ಹುಡುಗಿಯರ ಮುಖಗಳು ನಮ್ಮ ದಂಡಯಾತ್ರೆಯ ಸಿಪಾಯಿಗಳ ಕಣ್ಣುಗಳನ್ನು busy ಇಟ್ಟಿತ್ತು.
ಫ್ಯೂಶನ್, ಭಾವಗೀತೆ, ಹಿಂದಿ ಸಿನೆಮಾ ಹಾಡು, ಮೆಟಲ್, ರಾಕ್ - ಹೀಗೆ ಎಲ್ಲ ಹಾಡುಗಳ ಕಲಸುಮೇಲೋಗರದೊಡನೆ ಮೈಸೂರು ವಿ.ವಿ. ತಲುಪಿದ್ದು ಸರಿಯಾಗಿ ೧೦ಕ್ಕೆ. ಆಡಿಟೋರಿಯಮ್ ಆಗಲೇ ಭರ್ತಿಯಾಗಿತ್ತು!
ಹಲವರು ನಿಂತುಕೊಂಡು ಕೇಳುತ್ತಿದ್ದದ್ದು ಕಾಣಿಸಿತು.
ಗ್ನು/ಲಿನಕ್ಸ್ ಟಿ-ಶರ್ಟ್ ಹಾಕಿಕೊಂಡು ಒಂದೆರಡು ಕೆಲಸಗಳನ್ನು ಕೈಗೆತ್ತಿಕೊಂಡು ಮೈಸೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ (Physics) ಡಿಪಾರ್ಟ್ಮೆಂಟ್ ಲ್ಯಾಬಿಗೆ ಹೋದಾಗ ಅಲ್ಲಿರುವ ಹಲವು ಸಿಸ್ಟಮುಗಳಲ್ಲಿ ಗ್ನು/ಲಿನಕ್ಸ್ ಇದ್ದದ್ದು, ಜೊತೆಗೆ ಕನ್ನಡಕ್ಕೆ ಬೇಕಾದ ಸಕಲ ತಂತ್ರಾಂಶಗಳೂ ಅದರಲ್ಲಿದ್ದದ್ದು ನೋಡಿ ಖುಷಿಯಾಯ್ತು.
ಅತ್ತ ಗ್ನು/ಲಿನಕ್ಸ್ ಪರಿಚಯ ಜೋರಾಗಿ ನಡೆದಿತ್ತು. ದಣಿವಾಗಿದ್ದ ಕಾರಣ ಸ್ಟೇಜು ಬಿಟ್ಟು ಸ್ವಲ್ಪ ದೂರ ಉಳಿದೆ. ಒಂದೆರಡು ಬಾರಿ ಮಾತ್ರ ಇಂಗ್ಲಿಷ್ ಬಳಕೆ ಜೋರಾದಾಗ "ಸಂಪೂರ್ಣ ಇಂಗ್ಲೀಷ್ ಬೇಡ, ಕನ್ನಡ ಹೆಚ್ಚಾಗಿ ಇರಲಿ" ಎಂದು ಹೇಳಿ ಬಂದೆ. ಮೈಸೂರಿಗರಲ್ಲಿ ಸ್ವಚ್ಛ ಭಾರತೀಯ ಇಂಗ್ಲೀಷಿಗಿರುವ ಒಲವು ಅಚ್ಚರಿ ಮೂಡಿಸಿತು. ಈ ಬಾರಿ ಮೈಸೂರಿನ ತಂಡದವರ ಬಯಕೆಯಂತೆ ಗ್ನು/ಲಿನಕ್ಸ್ ಹಬ್ಬದ ನಕ್ಷೆ ಸ್ವಲ್ಪ ಬದಲಾಗಿತ್ತು. ಮೊದಲರ್ಧ ದಿನ ಗ್ನು/ಲಿನಕ್ಸಿನಲ್ಲಿರುವ ದಿನನಿತ್ಯದ ಬಳಕೆಯ ತಂತ್ರಾಂಶಗಳನ್ನು ಬಳಸುವುದು ಹೇಗೆ ಎಂಬುದರ ದೃಶ್ಯಾವಳಿ, ಮಾತುಕತೆ. ಉಳಿದರ್ಧ ದಿನ ಗ್ನು/ಲಿನಕ್ಸ್ installationಉ - ಗ್ನು/ಲಿನಕ್ಸ್ ಹಾಕಿಕೊಂಡು ಪ್ರಯತ್ನಿಸುವಲ್ಲಿ ಸಹಾಯ ಮಾಡುವ ಸಮಯ.
ನೂರಾರು ಜನ ಭಾಗವಹಿಸಿ ಗ್ನು/ಲಿನಕ್ಸ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ತೋರಿದ್ದು ಖುಷಿ ತಂದಿತು. ಕನ್ನಡದ ಸುತ್ತ ಕೆಲಸ ಮಾಡುತ್ತಿರುವ ಕೆಲವು ಹಿರಿಯರ ಪರಿಚಯ ಮುಖತಃ ಆದದ್ದು ಮತ್ತಷ್ಟು ಖುಷಿ ಕೊಟ್ಟಿತು.
ಪರಿಸರದ ಸುತ್ತ ಕಾಳಜಿವಹಿಸಿ ಕೆಲವು ಚಿಕ್ಕಪುಟ್ಟ ಸಂಶೋಧನೆಗಳನ್ನು ಮಾಡುತ್ತಿರುವ ಹಿರಿಯರೊಬ್ಬರು ಸ್ವತಃ ಮಾತನಾಡಿಸಲೆಂದು ಬಂದು ತಾವು ಮಾಡುತ್ತಿರುವ ಕೆಲಸದ ಬಗ್ಗೆ ತಿಳಿಸಿದರು. ಆಸಕ್ತಿ ಹುಟ್ಟಿಸಿತು.
ಬಂದವರಲ್ಲೊಬ್ಬರು ನನ್ನ ಮುಖ ಗುರುತಿಸಿ ನೀನು ಮೈಸೂರಿನಲ್ಲಿ ನಮ್ಮ ಸ್ಕೂಲಿನಲ್ಲೇ ಓದ್ತಾ ಇದ್ದಿ, ನಮ್ಮ ಜೂನಿಯರ್. ನಾವೆಲ್ಲ ಒಟ್ಟಿಗೇ ಕ್ರಿಕೆಟ್ ಆಡ್ತಾ ಇದ್ವಿ, ನೆನಪಿದೆಯಾ ಎಂದು ಕೇಳಿದ್ದು ನೆನಪಿನ ಪುಟಗಳನ್ನು ಮತ್ತೊಮ್ಮೆ ತಿರುವಿ ಹಾಕುವಂತೆ ಮಾಡಿತು. ನೆನಪು ಮಾತ್ರ ಆಗಲಿಲ್ಲ! ಮುಂದೆ ಓದಿ »
ನಾಳೆ ಹಬ್ಬ!
ನನಗೂ ಮರೆತು "ನಾಳೆ ಹಬ್ಬ ಅಲ್ವ?" ಅಂತ ಮಾತ್ರ ಹೇಳಿದೆ, ಪರಿಚಯದವರೊಬ್ಬರೊಂದಿಗೆ ಫೋನಿನಲ್ಲಿ ಮಾತನಾಡುವಾಗ. "ನಾಳೆ ಯಾವ ಹಬ್ಬಾರಿ?" ಎಂದು ಒಂದು ಕ್ಷಣ ತಲೆಕೆಡಿಸಿಕೊಂಡರು "ನಾಳೆ ಯಾವುದೂ ಇದ್ದ ಹಾಗಿಲ್ವಲ್ಲ?" ಮುಂದೆ ಓದಿ »
'ಕಾಶ್ಮೀರ್ ಟು ಕನ್ಯಾಕುಮಾರಿ' - ನೀರಿನ ಸೆಲೆ ಹಿಡಿದು
ಸಿ ಎಸ್ ಶಾರದಾ ಪ್ರಸಾದ್ ನೀರಿನ ಸೆಲೆಗಳನ್ನು ಹುಡುಕಿಕೊಂಡು ಇಡಿಯ ದೇಶ ಬೈಕಿನಲ್ಲಿ ಸುತ್ತಲು ಹೊರಟದ್ದರ ಬಗ್ಗೆ ಈ ಹಿಂದೆ ಬರೆದಿದ್ದೆ. ಅವರು ೯೦ ದಿನಗಳಲ್ಲಿ ೧೯,೦೦೦ಕ್ಕೂ ಹೆಚ್ಚು ಕಿ.ಮಿ. ಪ್ರಯಾಣ ಮಾಡಿದರೂ ಟ್ರಿಪ್ ಯಶಸ್ವಿಯಾಗಿ ಮುಗಿಸಿಕೊಂಡು ಬಂದದ್ದು ಈಗ ಹಳೆಯ ಸುದ್ದಿ. ಆದರೆ ಈ ಯಾತ್ರೆಯಲ್ಲಿ ಅವರಿಗಾದ ಅನುಭವದ ಪುಟಗಳಲ್ಲಿನ ಭಾಗಗಳನ್ನು ಕೇಳಿ ತಿಳಿದು, ಜೋಡಿಸಿ ಕಳೆದ ವಾರದ ತರಂಗದಲ್ಲಿ ಮಾನ್ಯ ಶ್ರೀ ಪಡ್ರೆಯವರು ಒಂದು ಸಚಿತ್ರ ಲೇಖನ ಬರೆದಿದ್ದಾರೆ. ತರಂಗದ ಕಾಪಿ ಸಿಕ್ಕರೆ ಓದಿ.
ಶಾರದಾ ಪ್ರಸಾದ್ ಭಾರತುದ್ದಕ್ಕೂ ಅವರು ಭೇಟಿ ನೀಡಿದ ಸ್ಥಳಗಳಲ್ಲಿ ನೀರಿನ ಪರಿಸ್ಥಿತಿಯ ಫೋಟೋ ಲಾಗ್ ಮಾಡಿದ್ದಾರೆ. ಅದನ್ನು ಇಲ್ಲಿ ವೀಕ್ಷಿಸಬಹುದು. ಮುಂದೆ ಓದಿ »
ಏನಿದೇನಿದು
ನಂಬಿಕೆಯುಳ್ಳವರಿಗಾಗಿ ದ್ವಿತಿ ವಿಜ್ಞ ಮಾಡಬಾರದೆಂದು:
ಪೂರ್ಣ ಆವೃತ್ತಿಗಾಗಿ ಮೇಲಿನ ಚಿತ್ರದ ಮೇಲೆ ಕ್ಲಿಕ್ ಮಾಡಿ. ಮುಂದೆ ಓದಿ »
...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಪೂರ್ಣ ಆವೃತ್ತಿಗಾಗಿ ಕೆಳಗೆ (ಚಿತ್ರದ ಮೇಲೆ) ಕ್ಲಿಕ್ ಮಾಡಿ.
"ಪೌಡರ್ ಗಿವ್ಡರ್ ಹಾಕಿಕೊಂಡ ಮನುಷ್ಯಳೊಬ್ಬಳು
ಕಣ್ಣು ಗಿಣ್ಣು ತಿರ್ಸಿ ಗಿರ್ಸಿ ಮಿಟುಗ್ಸಿ ಗಿಟುಕ್ಸಿ ನೋಡಿ ನಕ್ಕಾಗ... ಮುಂದೆ ಓದಿ »
ಮೊದಲ ಚಿತ್ರ
ಪೂರ್ಣ ಆವೃತ್ತಿಗೆ ಮೇಲೆ ಕ್ಲಿಕ್ ಮಾಡಿ. ಮಕ್ಕಳು ಮೊದಲ ಬಾರಿ ಚಿತ್ರ ಬಿಡಿಸಿದಾಗ, ಮೊದಲ ಬಾರಿ ಪೆನ್ನು ಹಿಡಿದು ಗೀಚಿದಾಗ ಅದನ್ನು ಜೋಪಾನ ತೆಗೆದಿಡುತ್ತೇವೆ, ಅಲ್ವ? ಇದೋ, ನನ್ನ ಮೊದಲ ಚಿತ್ರ - ಮಕ್ಕಳು ಪೆನ್ನು ಹಿಡಿದು ಬರೆಯುವುದ ಕಲೆತಂತೆ ಇವತ್ತು ಈ ಡಿಜಿಟಲ್ ಪೆನ್ನು ಹಿಡಿದು ಕಲೆಯುವಾಗ ಗೀಚಿದ ಮೊದಲ ಚಿತ್ರ! ಬಹಳ ದಿನಗಳ ನಂತರ ಗೊತ್ತು ಗುರಿಯಿಲ್ಲದೆ ಪರಿಚಯವಿಲ್ಲದ ಕಂಪ್ಯೂಟರ್ ಸಾಧನವೊಂದನ್ನು ಪ್ರಯತ್ನಿಸಿ ಕಲೆತದ್ದು ಖುಷಿಕೊಟ್ಟಿತು. ಇದನ್ನು ಸಂಪದದಲ್ಲಿ ತೆಗೆದಿಡುತ್ತಿದ್ದೇನೆ. ಮುಂದೆ ಓದಿ »
ಚಂದಿರನ ನೋಡಿದವ
ಡರ್ಶು ಸಹಜ ಜೀವನ ನಡೆಸುವ ಸಾಮಾನ್ಯ ಮನುಷ್ಯ. ಅವನನ್ನು ಕಳ್ಳನೆಂದೂ, ಕೆಟ್ಟವನೆಂದೂ ಓರೆಗಣ್ಣಿನಲ್ಲಿ ನೋಡುವವರೇ ಹೆಚ್ಚು. ಇವ ಕಾಡಿನಲ್ಲಿ ಬೇಟೆಯಾಡುತ್ತ, ಅಲೆಯುತ್ತ ಜೀವನ ಸಾಗಿಸುವವ. ಒಂದು ದಿನ ಇವನನ್ನು ಭೇಟಿ ಮಾಡುವವರಲ್ಲಿ ಸರ್ವೇ ತಂಡದ ಮುಖ್ಯಸ್ಥ ಸರಕಾರದ ಆಫೀಸರ್ ಕೂಡ ಇರುತ್ತಾನೆ. ಅವನು ಡರ್ಶುವಿನಲ್ಲೂ ವಿಶಿಷ್ಟವಾದ ಗುಣವೊಂದನ್ನು ಕಾಣುತ್ತಾನೆ. ಆದರೆ ಅದು ಉಳಿದವರಿಗೆ ಬಯಲಾಗುವುದು ಡರ್ಶು ಅವರೊಂದಿಗೆ ತನಗಿರುವ ಕಾಡಿನ ಮೂಲೆ ಮೂಲೆಯ ಪರಿಚಯವನ್ನು ಹಂಚಿಕೊಳ್ಳುತ್ತ ಕಷ್ಟ ಸುಖಗಳಲ್ಲಿ ಭಾಗಿಯಾದ ಮೇಲೇನೆ. ಡರ್ಶು ಏನೂ ಬಯಸದೆ, ಕೊನೆಗೆ ಬರಬಹುದು ಎಂದೂ ಆಲೋಚಿಸದ ಒಂದು ಕೋವಿಗಾಗಿ ಎಲ್ಲ ಕೆಲಸ ಮಾಡುವುದು ಈಗಿನ ನಮ್ಮ urban ಜಗತ್ತಿಗೆ ಪರಿಚಯವೇ ಇಲ್ಲದ ಗುಣ. ಅದೆಲ್ಲ ಇರಲಿ, ಸರ್ವೇ ಉದ್ದಕ್ಕೂ ಜೊತೆ ನೀಡಿದ ಡರ್ಶು ಹೊಸ ಕೋವಿ ಹಿಡಿದು ಒಮ್ಮೆ ಕಾಡಿನಲ್ಲಿ ಬೇರೇನೋ ಹೊಡೆಯಲು ಹೋಗಿ ಹುಲಿಯೊಂದನ್ನು ಹೊಡೆದುಬಿಡುತ್ತಾನೆ. ಹುಲಿ ಹೊಡೆದಿದ್ದೇನೆಂದು ತಿಳಿದ ಕೂಡಲೆ ಅವನಲ್ಲಿ ಖಿನ್ನತೆ ಆವರಿಸಿಬಿಡುತ್ತದೆ.
ಏನು ಬೇಟೆಯಾಡಿದರೂ ಹುಲಿಯನ್ನು ಹೊಡೆಯಬಾರದು, ಹುಲಿ ಹೊಡೆದರೆ ಅದು ಪಾಪ ಎನ್ನುವ ನಂಬಿಕೆ ಅವನದು. ಕೊನೆಗೆ ಪಾಪ ಮಾಡಿದೆನೆಂಬ ಅದೇ ಕೊರಗು ಜೀವನದಲ್ಲಿನ ಆಸೆ ಹೋಗಿಸಿಬಿಡುತ್ತದೆ. ಕಾಡಿಗೆ ಹೋದರೆ ಹುಲಿರಾಯ ಬಿಡನು, ಊರ ಮನೆಯ ಜೀವನ ಒಗ್ಗದು. ಕೊನೆಗೊಂದು ದಿನ ಹೊಸ ಕೋವಿ ಹಿಡಿದು ಕಾಡಿನೆಡೆಗೆ ಹೊರಟ ಇವನು ಮತ್ತೆ ಕಾಣಿಸುವುದಿಲ್ಲ, ಅವನು ತೆಗೆದುಕೊಂಡು ಹೋದ ಕೋವಿ ಮಾತ್ರ ಪೋಲಿಸರಿಗೆ ಸಿಗುತ್ತದೆ. ಮುಂದೆ ಓದಿ »
Cosmetics ಬಳಕೆಯ ಸುತ್ತ
ನಮ್ಮ ಕಿಟ್ಟಿ ಸರ್ ಹೇಳುತ್ತಿದ್ದರು:
ಫೇರ್ ಎಂಡ್ ಲವ್ಲಿ ಹಚ್ಚಿಕೊಳ್ಳೋದು, ಹಚ್ಚಿಕೊಂಡು "ನಾನೇ ಫೇರ್, ನಾನೇ ಲವ್ಲಿ" ಅಂದುಕೊಳ್ಳೋದು! ಅಂತ. ಮುಂದೆ ಓದಿ »

