Feed aggregator
ಮನಸ್ಸು, ಆರೋಗ್ಯ
ಪರಿವೇಶಣ -
December 24, 2011 - 14:36
ಕಳೆದ ಎರಡು ಮೂರು ವಾರ ಆರೋಗ್ಯ ಸರಿ ಇಲ್ಲದೆ ಮಲಗಿದ್ದೆ. ಆಫೀಸು, ಕಂಪ್ಯೂಟರು ಎಷ್ಟೋ ವರ್ಷಗಳಲ್ಲಿ ಮೊದಲ ಬಾರಿ ಸಂಪೂರ್ಣವಾಗಿ ದೂರ ದೂರ! ನಿದ್ರೆ ಮಾಡದ ಹೊತ್ತು ಬಹಳಷ್ಟು ಸಮಯ ಕಂಪ್ಯೂಟರ್ ಜೊತೆಗೇ ಇರುತ್ತಿದ್ದ ನನಗೆ ಈ ಲೋಕದ ಸಂಪರ್ಕ ಒಂದಷ್ಟು ದಿನ ಕಡಿದುಬಿದ್ದಿತ್ತು. ನಿತ್ಯದ ಕೆಲಸ ಮನಸ್ಸನ್ನು ಆವರಿಸಿ ಬಿಡುವಿಲ್ಲದಂತಿರುವಾಗ ಹತ್ತಿರವೂ ಸುಳಿಯದ ಆಲೋಚನೆಗಳು ಈ ಸಮಯದಲ್ಲಿ ತಲೆ ಹೊಕ್ಕವು. ಉಸಿರಾಡಲೂ ಕಷ್ಟವಾಗುವ ಸಮಯ ಬೇರೊಂದು ವಿಷಯದ ಕುರಿತು ಆಲೋಚನೆ ಕೂಡ ಮಾಡಲಾಗದು. ಹೀಗಿದ್ದೂ ಕೆಲವು ವಿಷಯಗಳು ಕೊರೆಯುವ ಚಳಿಯಂತೆ ಆವರಿಸಿದಾಗ ಬಿಸಿಲಿಗಾಗಿ, ಬೆಳಕಿಗಾಗಿ ಹುಡುಕುವುದು ಸಹಜ. ಅಥವ ಆಲೋಚನೆಗಳನ್ನು ಬದಿಗಿಡಲು ಮತ್ತೊಮ್ಮೆ ಕೆಲಸದ ಮೊರೆ ಹೋಗುವುದೂ ಆದೀತು, ಆದರೆ ಎಷ್ಟು ಹೊತ್ತು ತಾನೆ ಕೆಲಸವೂ ಮಾಡಲಾದೀತು?
















